Posts

Showing posts from November, 2025

ಮತ್ತೆ ರಜೆ ಪರ್ವ? ನವೆಂಬರ್ 7ಕ್ಕೆ ಶಾಲಾ–ಕಾಲೇಜುಗಳಿಗೆ ರಜೆ ಸಾಧ್ಯತೆ!

ಮತ್ತೆ ರಜೆ ಪರ್ವ? ನವೆಂಬರ್ 7ಕ್ಕೆ ಶಾಲಾ–ಕಾಲೇಜುಗಳಿಗೆ ರಜೆ ಸಾಧ್ಯತೆ! 2025ರ ಶೈಕ್ಷಣಿಕ ವರ್ಷ ಆರಂಭವಾದ ಬಳಿಕ ಕರ್ನಾಟಕದ ವಿದ್ಯಾರ್ಥಿಗಳಿಗೆ ರಜೆಗಳ ಸುರಿಮಳೆಯೇ ಆಗುತ್ತಿದೆ. ಈಗಾಗಲೇ ಸುಮಾರು 60 ದಿನಗಳಿಗೂ ಅಧಿಕ ರಜೆ ಸಿಕ್ಕಿದ್ದು, ಒಂದಿನ ತಕ್ಷಣವೇ ಮತ್ತೆ ತರಗತಿಗಳಿಗೆ ಹಾಜರಾಗುವ ಸವಾಲು ವಿದ್ಯಾರ್ಥಿಗಳದ್ದಾಗಿದೆ. ಈ ನಡುವೆ ನವೆಂಬರ್ 7ರಂದು ಕರ್ನಾಟಕ ಬಂದ್ ನಡೆಯುವ ಸಾಧ್ಯತೆ ಹಿನ್ನೆಲೆ, ಶಾಲೆ–ಕಾಲೇಜುಗಳಿಗೆ ಮತ್ತೆ ರಜೆ ಘೋಷಣೆಯಾಗುವ ನಿರೀಕ್ಷೆ ಮೂಡಿದೆ.   ಹಬ್ಬ, ದಸರಾ... ಈಗ ಮತ್ತೆ ರಜೆ ಮಾತು! ಈ ವರ್ಷ ಶ್ರಾವಣ ಮಾಸ, ಸಾಲು ಸಾಲು ಹಬ್ಬಗಳು, ದಸರಾ ರಜೆ ಸೇರಿ ಹಲವು ದಿನಗಳ ಕಾಲ ಶಾಲೆಗಳಿಗೆ ವಿರಾಮ ಸಿಕ್ಕಿತ್ತು. ಅದರಲ್ಲೂ ದಸರಾ ರಜೆ 1 ತಿಂಗಳಿಗೂ ಹೆಚ್ಚು ಇದ್ದ ಕಾರಣ, ಮಕ್ಕಳು ಕುಟುಂಬದವರ ಜೊತೆ ಸಮಯ ಕಳೆಯುವ ಅವಕಾಶ ಪಡೆದಿದ್ದರು. ಆದ್ರೆ ಇದೀಗ ಮತ್ತೆ ಬಂದ್ ಕರೆ ಮಾತು ಕೇಳಿಬರುತ್ತಿರುವುದರಿಂದ, ನವೆಂಬರ್ 7ರಂದು ಶೈಕ್ಷಣಿಕ ಸಂಸ್ಥೆಗಳು ಬಂದ್ ಆಗಲಿವೆಯೇ? ಎಂಬ ಕುತೂಹಲ ಶುರುವಾಗಿದೆ. ಏಕೆ ಕರ್ನಾಟಕ ಬಂದ್ ಚರ್ಚೆ? ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ರಾಜ್ಯದಾದ್ಯಂತ ಹೋರಾಟ ತೀವ್ರಗೊಳ್ಳುತ್ತಿರುವುದು ಬೆಳಗಾವಿಯಿಂದ ಆರಂಭವಾದ ಪ್ರತಿಭಟನೆ ಇತರ ಜಿಲ್ಲೆಗಳಿಗೂ ವಿಸ್ತರಣೆ ಕಬ್ಬಿಗೆ ₹3500 ಬೆಲೆ ನಿಗದಿ ಆಗಬೇಕು ಎಂದು ರೈತರ ಪಟ್ಟು ಸರ್ಕಾರದ ಜೊತೆ ನಡೆದ ಸಂಧಾನ ವಿಫಲ ಈ ಎಲ್ಲ ಬೆಳವಣಿಗೆಗಳ ನಡುವೆ, ನ...